ನಮ್ಮ ಮೆಚ್ಚಿನ 68 ನೇ ಕನ್ನಡ ರಾಜ್ಯೋತ್ಸವವನ್ನು ನವಂಬರ್ ೨ ರಂದು ವಿವೇಕಾನಂದ ತಾಂತ್ರಿಕ ವಿದ್ಯಾಲಯದಲ್ಲಿ ಭೂಮಿಕಾ ಕಲಾಸಂಘದ ವತಿಯಿಂದ ಆಚರಿಸಲಾಯಿತು.

ಮೊದಲಿಗೆ ರಾಜೋತ್ಸವದ ಬಗ್ಗೆ ವಿವರಗಳನ್ನು ಕೊಡಲಾಯಿತು. ಆನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ನೃತ್ಯ, ರಾಜೋತ್ಸವದ ಬಗ್ಗೆ ಗಾಯನಗಳು ಒಳಗೊಂಡಿದ್ದವು. ತದನಂತರ ರಾಜ್ಯೋತ್ಸವದ ಮಹತ್ವದ ಬಗ್ಗೆ ತಿಳಿಸಿ, ಕನ್ನಡದ ಬಗ್ಗೆ ಜಾಗೃತಿಯನ್ನು ಮೂಡಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

ವಿವೇಕಾನಂದ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡದ ಮಹತ್ವ ಹಾಗೂ ಕನ್ನಡದ ಮೇಲೆ ಅಭಿಮಾನ ಬೆಳೆಯಲು ಕನ್ನಡ ಸಂಘವನ್ನು ಹುಟ್ಟುಹಾಕಲಾಯಿತು. ನವಂಬರ್ ಒಂದರಂದು ನಡೆದ 68ನೇ ವರ್ಷದ ಕನ್ನಡ ರಾಜ್ಯೋತ್ಸವಕ್ಕೆ ಅನುಗುಣವಾಗಿ ೬ ಸ್ಪರ್ಧೆಗಳನ್ನು ವಿದ್ಯಾಲಯದಲ್ಲಿ ನಡೆಸಲಾಯಿತು. ರಸಪ್ರಶ್ನೆ, ಜಾನಪದ ಗೀತೆ, ಕವನ ರಚನೆ, ಚರ್ಚಾ ಸ್ಪರ್ಧೆ, ಅಶುಭಾಷಣ, ಚಿತ್ರಕಲೆ ಮುಂತಾದ ಸ್ಪರ್ಧೆಗಳನ್ನು ಮಕ್ಕಳಿಗಾಗಿ ನಡೆಸಲಾಯಿತು.ಇಂತಹ ಸ್ಪರ್ಧಿಗಳಲ್ಲಿ ಮಕ್ಕಳು ಉತ್ಸಾಹದಿಂದ ಸ್ಪೂರ್ತಿಯಿಂದ ಭಾಗವಹಿಸಿದರು ಹಾಗೂ ಹಲವಾರು ಬಹುಮಾನಗಳನ್ನು ಗೆದ್ದರು. ಕನ್ನಡ ಸಂಘದ ಮೂಲ ಉದ್ದೇಶವೇನೆಂದರೆ ಮಕ್ಕಳಲ್ಲಿ ಕನ್ನಡದ ಬಗ್ಗೆ ಆಸಕ್ತಿ, ಕರ್ನಾಟಕದ ಬಗ್ಗೆ ಅಭಿಮಾನ ಮೂಡಿಸಲು ಇಂತಹ ಹಲವಾರು ಸ್ಪರ್ಧೆಗಳನ್ನು ವಿದ್ಯಾಲಯದಲ್ಲಿ ನಡೆಸಲಾಯಿತು

 
Scroll to top